User:Ranjitha171

From Wikidata
Jump to navigation Jump to search

ನಮ್ಮ ಈ ಭೂಮಿತಾಯಿಯ ಮಡಿಲಿನಲ್ಲಿ ಅನೇಕ ಮಹಾತ್ಮರು ಜನಿಸಿದ ಈ ಭವ್ಯ ನಾಡಿನಲ್ಲಿ ರಾಮಸ್ವಮಿ ಮತ್ತು ಜಾನಕಿ ಎಂಬ ದಿವ್ಯ ದಂಪತಿಗಳಿಗೆ ದಿನಾಂಕ ೩/೦೯/೧೯೯೯ ರಂದು ಜನಿಸಿದೆನು.ಪುಟ್ಟ ಮಗುವಾದ ನನ್ನ ಸುಂದರ ಸುಮಧುರ ಬಾಲ್ಯ ಎಂಬ ಮೊಗ್ಗು ಅರಳಿದ್ದು ಹುಬ್ಬಳ್ಳಿಯ ಬಳಿಯಿರುವ ಮುಂಡಗೋಡ ಎಂಬ ಪುಟ್ಟ ಗ್ರಮದಲ್ಲಿ. ಶಾಲೆಯಲ್ಲಿ ಸರಿಯಾಗಿ ಓದುವಿಕೆಗೆ ಪ್ರಾಮುಖ್ಯತೆ ಇರದೆ ನನ್ನ ತಂದೆಯ ಆಸೆ ಕನಸಿನಂತೆ ಪ್ರಮುಖ ವ್ಯಕ್ತಿಯಾಗಿ ಬಾಳಬೇಕೆಂಬ ಛಲದಿಂದ ಮಂಗಳೂರಿನ ಕಡೆಗೆ ನನ್ನ ಪಯಣ ಸಾಗಿತು.೭ರಿಂದ -೧೦ನೇ ತರಗತಿಯವರೆಗೆ ಅಲ್ಲಿಯೇ ಇದ್ದು ಶಾಲಾ ಶಿಕ್ಷಣ ಮೂಗಿಸಿದೆನು.ಮೊದಮೊದಲಿಗೆ ತಂದೆ ತಾಯಿಯ ನೆನಪು ಅಬಿನಾಭವವಾಗಿತ್ತು.ತದನಂತರ ಅನೇಕ ಸ್ನೆಹಿತರ ಗೆಳೆತೆನ ಅದನ್ನು ಮರೆಮಾಚುತ್ತಾ ಬಂತು.ಶಾಲೆಯಲ್ಲಿ ಸದಾ ಗುರುಗಳ ಬಳಿ ಹೂಡೆಸಿಕೂಳುಳ್ಳುವುದು ನನ್ನ ಪಾಲಿಗೆ ಕಟ್ಟಿಟ್ಟ ಬುತ್ತಿಯಾಗಿರುತಿತ್ತು.ಗುಡ್ದ-ಮರಗಳ ನಡುವೆ ಇರುವ ಪ್ರದೇಶವಾಗಿತ್ತು ನನು ಓದಿದ ಜಾಗ.ನನ್ನ ಶಾಲೇ ಬಿಟ್ಟರೆ ಇನೊಂದು ಅಂಗದಡಿ ಅಥವ ಮನೆಗಾಗಿ ಹಾನ್ನೇರಡು ಕಿ.ಮಿ ಸಾಗಬೀಕಿತ್ತು.ವಾರಕ್ಕೆ ಒಂದು ಬಾರಿ ಮೂರು ನಿಮಿಷ ಮನೆಯವರ ಬಳಿ ದುರವಾಣಿಯಲ್ಲಿ ಮಾತನಾಡುವ ಅವಕಾಶ ಸಿಕಿದ್ದು,ಆರು ತಿಂಗಳಿಗೊಮ್ಮೆ ಮನೆಗೆ ಹೋಗೆ ಅಮ್ಮ ಮಾಡುವ ಅನೇಕ ರುಚಿ-ರುಚಿಯ ತಿಂಡಿಗಳನ್ನು ತಿನ್ನಲು ರಜಾ ಸಿಕಿದ್ದು ಆಗ ದೇವರು ನೀಡಿದ ಅಮೂಲ್ಯ ವರವಾಗಿತ್ತು.ನನ್ನ ಸೋಮಾರಿತನ,ಕೋಪವನ್ನು ಕಿತ್ತುಹಾಕಿದ ಪವಿತ್ರ ಜಾಗ ಅದಾಗಿತ್ತ್ತು.ಆನನ್ನ ಮೂದ್ದು ಶಾಲೆಗೆ ನಾನು ಸಾದಾ ಚಿರರುಣಿಯಾಗಿದ್ದೆನೆ.ಮೂಖ್ಯ ಸಂಗತಿ ಏನೆಂದರೆ,ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ನನ್ನದು ಮುಖ್ಯ ಪಾತ್ರವಾಗಿರುತ್ತಿತ್ತು.ಹಾಡು,ನಾಟಕ,ಕಾವನ ಬರಹ ಏನೆ ಆದರು ನನ್ನದೊಂದು ಕಾಣಿಕೆ ಇರುತ್ತಿತ್ತು.ಮುಂದೆ ನನ್ನ ಜೀವನ ಪಯಣ ಸಾಗಿದ್ದು ಶಿರಸಿಯಲ್ಲಿ.

              ಪ್ರಥಮ ಪಿಯುಸಿಯೆಂದರೆ ಸಾಕು ಎಲ್ಲರಲ್ಲು ಎಲ್ಲಿಲ್ಲದ ಉತ್ಸಾಹ.ನಮ್ಮ-ನಿಮ್ಮೆಲರ ಪ್ರಕಾರ ಜೀವನದ ಒಂದು ಮಹಾ ಘಟ್ಟ.ಚಿಕ್ಕ ಮಕ್ಕಳಂತೆ ಯೋಚಿಸದೆ ಫ್ರೌಡ ಯುವಜನತೆಯಂತೆ ವಿಚರಿಸಬೇಕು.ನನಗೆ ಕಾಲೇಜು ಎಂದಗ ನೆನಪಾದದ್ದು ಏನೆಂದರೆ ನಮಗ್ಗಿಂತ  ಹಿರಿಯವರು ಮಾಡುವ  ಕೀತಲೆಗಳು,ಅದನ್ನು ನಾನು ಯವ ರೀತಿ ಎದುರಿಸಬೇಕು?ಎಂಬ ಆಲೋಚನೆ.ಆದರೆ ದೀವರ ದಯೆಯಿಂದ ಆ ರೀತಿಯ ವಿಚಾರ ಕಂಡುಬರಲಿಲ್ಲ.ಚಿಕ್ಕ ವಯಸಿನಲ್ಲಿ ಎಲ್ಲದರಲ್ಲು ಭಾಗವಹಿಸಸಲು ಹಾತೋರೆಯುತ್ತಿದ್ದ ನನ್ನ ಮನಸ್ಸು ಆಗ ಕೇವಲ ಓದು-ಓದು   

ಎಂದು ಚಡಪಡಿಸಿತು.ಪುಸ್ತಕ ತೆರೆದರೆ ತಂದೆ ತಾಯಿ ನನ್ನ ಒದಿಗಗಿ ಮಾಡುತ್ತಿರುವ ತ್ಯಾಗ ಕಣ್ಣಿಗೆ ಕಾಣಿಸುತಿತ್ತು.ಅದುವೇ ನನಗೆ ಒದಲು ಪ್ರೆರೆರ್ಪಿಸುತ್ತಿತ್ತು.ಪ್ರಥಮ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದು ದ್ವೀತಿಯ ಪಿಯುಸಿಯಲ್ಲೂ ಕೂಡ ನನ್ನ ಗಮನ ಓದಿನ ಕಡೆ ಬಿಟ್ಟು ಬೇರೆಕಡೆ ವಾಲಲಿಲ್ಲ.ಅತ್ಯುತ್ತಮ ಅಂಕ ಪಡೆದ ನಾನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಉತ್ತಮ ಕಾಲೇಜಿಗೆ ಹೋಗಲು ಮನಸ್ಸು ಮಾಡಿದೆನು.ನನ್ನ ಹೆತ್ತವರು ಮೊದಮೊದಲು ಇಲ್ಲಿಗೆ ಬರಲು ನಿರಕರಿಸಿದರು ಕಾರಣ ನಾನು ಬೆಳೆದ ವಾತಾವರಣ ಹಳ್ಳಿಯಾದ್ದರಿಂದ ಪಟ್ಟಣದಲ್ಲಿ ನನ್ನ ಇರುವಿಕೆಯ ಆತಂಕ ಅವರದಾಗಿತ್ತು.ಇಲ್ಲಿ ಬಂದಾಗ ಆದ ಭಯವನ್ನು ನನಪಿಸಿಕೊಂಡರೆ ಈಗಲು ಎದೆ ಜೋರಾಗಿ ಮಿಡಿಯುವುದು.ಬೆರೆಯವರ ಬಳಿ ಮಾತನಾತಡುವ ತಿಳುವಳಿಕೆ,ಒಬ್ಬಳೆ ಎಲ್ಲಿಹೋದರು ಜೆವಿಸುವ ಚಣಕ್ಯ,ಈ ಪುಣ್ಯ ವಿದ್ಯಾಲಯದಲ್ಲಿ ಕಲಿತಿರುವೆ .ನನ್ನ ಆಸಕ್ತಿಯ ಚಟುವಟಿಕೆಗಳೆಂದರೆ ಕವನರಚಿಸುವುದು,ಹಾಡುವುದು,ನಾಟಕ,ಹೊಸ-ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು ಇತ್ಯಾದಿ. ದೇಶಕ್ಕಾಗಿ ಏನಾದರು ಪುಟ್ಟ ಕಾಣಿಕೆಯನ್ನು ನೀಡಬೇಕೆಂಬ ಮಹದಾದಸೆ ನನ್ನದಾಗೆದೆ.ಈ ಭೂಮಿತಾಯಿಯ ಪಾದಾರಗಳಿಗೆ ಹೂವಾಗಬೇಕೆಂಬ ಆಶಯ.ನನ್ನ ಅನುಭವವನ್ನು ಅಕ್ಷರಗಳ ಮೂಲಕ

 ಹೇಳಲು ಅವಕಾಶ ನೀಡಿದಕ್ಕಾಗಿ ನನ್ನ ಕೋಟಿ ಪ್ರಣಾಮಗಳು......